There are no items in your cart
Add More
Add More
Item Details | Price |
---|
Language: ಕನ್ನಡ
ಹಕ್ಕಿಗಳು ಅನಾದಿಕಾಲದಿಂದಲೂ ಮಾನವನ ಕಲ್ಪನಾ ಶಕ್ತಿಯನ್ನು ಪರವಶಮಾಡಿಕೊಂಡು, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದಕ್ಕೆ ಅಪಾರವಾದ ಸ್ಫೂರ್ತಿ ನೀಡುತ್ತಿವೆ. ಹಿಮಾಲಯದೆಡೆ ವಲಸೆ ಹೋಗುವ ಸಾಹಸವಾಗಿರಲಿ, ಅಥವಾ ನಮ್ಮ ಹಿತ್ತಲಲ್ಲಿ ಪ್ರತಿದಿನವೂ ಕಂಡುಬರುವ ಅವುಗಳ ಪ್ರಣಯದಾಟ ಮತ್ತು ಗೂಡುಕಟ್ಟುವ ನಡವಳಿಕೆಯಾಗಿರಲಿ, ಪರಿಸರದ ಅದ್ಭುತಗಳನ್ನು ತಿಳಿದು ಸಂಭ್ರಮಿಸಲು ನಮ್ಮೆಲ್ಲರನ್ನು ಕೈಬೀಸಿ ಕರೆಯುತ್ತವೆ. ಭವ್ಯವಾದಂತಹ ಸಾರಸ್ ಕೊಕ್ಕರೆಯಿಂದ ಹಿಡಿದು (Sarus Crane) ಮಧುರಕಂಠದ ಸರಳೆಸಿಳ್ಳಾರ (Malabar Whistling-thrush) ಹಕ್ಕಿಯವರೆಗೆ, ಪ್ರತಿಯೊಂದು ಪ್ರಭೇದವೂ ನಮ್ಮ ಜೀವನವನ್ನು ಸಂಪನ್ನಗೊಳಿಸುವ ವಿಶಿಷ್ಟವಾದ ಕಥೆಯನ್ನು ಹೇಳುತ್ತದೆ. ಪಕ್ಷಿಗಳ ಪ್ರಪಂಚಕ್ಕೆ ಕೊಂಡೊಯ್ಯುವ ರೋಮಾಂಚಕವಾದ ‘ಪಕ್ಷಿಗಳ ವಿಸ್ಮಯ ಜಗತ್ತು’ ಅಧ್ಯಯನ ಕ್ರಮಕ್ಕೆ ತಮ್ಮೆಲ್ಲರಿಗೂ ಸ್ವಾಗತ.
ಪಕ್ಷಿಗಳ ಪ್ರಪಂಚಕ್ಕೆ ಕೊಂಡೊಯ್ಯುವ ರೋಮಾಂಚಕವಾದ ‘ಪಕ್ಷಿಗಳ ವಿಸ್ಮಯ ಲೋಕ’ ಅಧ್ಯಯನ ಕ್ರಮಕ್ಕೆ ತಮ್ಮೆಲ್ಲರಿಗೂ ಸ್ವಾಗತ!
ಏನಿದು?
ಪಕ್ಷಿಗಳ ಸೌಂದರ್ಯ ಮತ್ತು ಮಹತ್ವದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವಲ್ಲಿ ಪ್ರೇರೇಪಣೆ ನೀಡಲು ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾದ ಮಲ್ಟಿಮೀಡಿಯಾ, ಮೊಬೈಲ್ ಸ್ನೇಹಿ, ಉಚಿತ ಆನ್‌ಲೈನ್ ಅಧ್ಯಯನ ಕ್ರಮವು ಇದಾಗಿದೆ.
ಇದನ್ನು ಯಾರು ತೆಗೆದುಕೊಳ್ಳಬಹುದು?
ಕುತೂಹಲಿಗಳಾದ 11 ವರ್ಷ ಮೇಲ್ಪಟ್ಟ ಪ್ರಕೃತಿ ಪ್ರಿಯರು, ಕನ್ನಡದ ಸಾಕ್ಷರತೆ ಮತ್ತು ಇಂಟರ್ನೆಟ್ ಇರುವ ಸ್ಮಾರ್ಟ್ ಫೋನ್ ಹೊಂದಿರುವ ಯಾರಾದರೂ ಈ ಅಧ್ಯಯನ ಕ್ರಮವನ್ನು ತೆಗೆದುಕೊಳ್ಳಬಹುದು.
ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಇದು ಸ್ವಯಂ-ಗತಿಯಲ್ಲಿ ಪೂರ್ಣಗೊಳಿಸಬಹುದಾದ ಅಧ್ಯಯನ ಕ್ರಮವಾಗಿದೆ. ನೀವು ಸೈನ್ ಅಪ್ ಮಾಡಿದ ನಂತರ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಪೂರ್ಣಗೊಳಿಸಬಹುದು. ಪ್ರಾರಂಭದಿಂದ ಕೊನೆಯವರೆಗೆ ಸುಮಾರು 3 ಗಂಟೆಗಳ ಸಮಯ ಹಿಡಿಯಬಹುದೆಂದು ಅಂದಾಜಿಸಲಾಗಿದೆ.
ಇದನ್ನು ಹೇಗೆ ರಚಿಸಲಾಗಿದೆ? ಇದರಲ್ಲಿ 4 ಅಧ್ಯಾಯಗಳಿದ್ದು, ಪರಸ್ಪರ ಸಂಬಂಧವನ್ನು ಹೆಣೆಯುವ ಮತ್ತಷ್ಟು ವಿಷಯಗಳನ್ನು ಒಳಗೊಂಡಿವೆ.
ಈ ಪರಿಚಯಾತ್ಮಕ ಅಧ್ಯಾಯದಲ್ಲಿ ಪಕ್ಷಿಗಳ ಅಸಾಧಾರಣ ಮತ್ತು ಆಕರ್ಷಕವಾದ ಜಗತ್ತನ್ನು ಅನ್ವೇಷಿಸಿ. ಅದ್ಭುತ ಮತ್ತು ಉತ್ಸಾಹಭರಿತವಾದ ಪ್ರಯಾಣವನ್ನು ಕೈಗೊಳ್ಳಿ.
ಸಂಸ್ಕೃತಿ, ಜಾನಪದ ಕಥೆಗಳು ಮತ್ತು ಸಾಹಿತ್ಯದ ಮೂಲಕ ಪಕ್ಷಿಗಳು, ನಮ್ಮ ದೈನಂದಿನ ಬದುಕಿನ ಭಾಗವಾಗಿ ಹೇಗೆ ಹೆಣೆದುಕೊಂಡು ಬಂದಿವೆ ಎಂಬುದನ್ನು ಅನ್ವೇಷಿಸಿ.
ಬಾರ್-ಟೇಲ್ಡ್ ಗಾಡ್ವಿಟ್ (Bar-tailed Godwit) ಎಂಬ ಹಕ್ಕಿಯು ಆಹಾರ ಮತ್ತು ವಿಶ್ರಾಂತಿಯಿಲ್ಲದೆ ಅಲಾಸ್ಕಾದಿಂದ ಟ್ಯಾಸ್ಮೇನಿಯಾದವರೆಗೆ ಕೇವಲ 11 ದಿನಗಳಲ್ಲಿ ಸುಮಾರು 14,000 ಕಿ.ಮೀ.ಗಳಷ್ಟು ದೂರ ಹಾರಾಟ ನಡೆಸುವ ಮೂಲಕ ದಾಖಲೆಗಳನ್ನು ಮುರಿದಿದೆ! ಫೋಟೋ ಕೃಪೆ: ಬ್ಲೇರ್ ಡ್ಯೂಡೆಕ್/ಮಕಾಲೆ ಲೈಬ್ರರಿ.
ಗುಬ್ಬಚ್ಚಿಗಳು 5000 ವರ್ಷಗಳಿಂದ ಮನುಷ್ಯರೊಟ್ಟಿಗೆ ವಾಸಿಸುತ್ತಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಪುಟ್ಟ ಹಕ್ಕಿಗಳು ತಮ್ಮ ಗೂಡುಗಳನ್ನು ಬಿರುಕುಗಳಲ್ಲಿ, ಬೀದಿ ದೀಪಗಳ ಮೇಲೆ ಮತ್ತು ಗೂಡಿನ ಪೆಟ್ಟಿಗೆಗಳಲ್ಲಿಯೂ ಸಹ ನಿರ್ಮಿಸುತ್ತವೆ.ಫೋಟೋ ಕೃಪೆ: ಸುಭದ್ರಾ ದೇವಿ
ನಿಮ್ಮ ಹಿತ್ತಲಿನಲ್ಲಿ ಕಂಡುಬರುವ ಪಕ್ಷಿಗಳನ್ನು ಗಮನಿಸುವುದು, ಅವುಗಳ ನಡವಳಿಕೆ ಮತ್ತು ಆವಾಸಸ್ಥಾನಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ.
ಪಕ್ಷಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಒಳನೋಟವನ್ನು ಪಡೆಯುವುದರ ಜೊತೆಯಲ್ಲಿ, ಅವುಗಳ ಸಂರಕ್ಷಣೆಗೆ ಕಾರ್ಯಸಾಧ್ಯವಾಗುವ ಗುಣಾತ್ಮಕ ಕ್ರಮಗಳನ್ನು ಅನ್ವೇಷಿಸಿ.
ನಿಮಗೆ ತಿಳಿದಿದೆಯೇ? ಭಾರತದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ (State of India’s Birds) ವರದಿಯು ನೀಡಿರುವ ಮಾಹಿತಿಯ ಪ್ರಕಾರ, ಕಾಡುಗಳನ್ನು ತೆರವುಗೊಳಿಸುವಿಕೆ ಮತ್ತು ಭೂ-ಬಳಕೆಯ ಬದಲಾವಣೆಗಳಿಗೆ ಈ ಪಕ್ಷಿಗಳು ಹೊಂದಿಕೊಂಡಿವೆ ಎಂಬುದು ತಿಳಿದುಬಂದಿದೆ. ಫೋಟೋ ಕೃಪೆ: ಶಾಶ್ವತ್ ಮಿಶ್ರಾ.
ಈ ಕೋರ್ಸ್ ಹಂತಹಂತವಾಗಿ ಮುಂದುವರಿದು ಪ್ರತಿಯೊಂದು ಅಧ್ಯಾಯವು ಹಿಂದಿನ ಅಧ್ಯಾಯಗಳ ಆಧಾರದ ಮೇಲೆ ರೂಪುಗೊಂಡಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಿಡುವಿನ ವೇಳೆಯಲ್ಲಿ ನಿಧಾನಗತಿಯಲ್ಲಿ ಮರುವೀಕ್ಷಣೆ ಮಾಡುತ್ತಾ, ರೋಮಾಂಚಕ HD ವೀಡಿಯೊಗಳು, ಆಟಗಳು ಮತ್ತು ಮೋಜಿನ ರಸಪ್ರಶ್ನೆಗಳನ್ನು ಒಳಗೊಂಡಿರುವ ಹಲವಾರು ವಿಷಯಗಳನ್ನು ಕೂಲಂಕಷವಾಗಿ ಅರಿತುಕೊಳ್ಳಿ.
‘ಪಕ್ಷಿಗಳ ವಿಸ್ಮಯ ಲೋಕ’ ಕೇವಲ ಕಲಿಕೆಯ ಅನುಭವವಲ್ಲದೆ, ರೋಮಾಂಚನವಾದ ಸಾಹಸವೂ ಆಗಿದೆ! ಪಕ್ಷಿಗಳೆಂಬ ಅದ್ಭುತಗಳನ್ನು ಮತ್ತು ನಮ್ಮ ಜೀವನದಲ್ಲಿ ಹಾಗೂ ಜಗತ್ತಿನಲ್ಲಿ ಅವುಗಳ ಮಹತ್ತರವಾದ ಪಾತ್ರವನ್ನು ತಿಳಿಯಲು ಇಲ್ಲಿರುವ ಎಲ್ಲಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕು. ಈಗ ಸಕ್ರಿಯವಾದ, ಆನಂದದಾಯಕ ಕಲಿಕೆಯ ಪ್ರಯಾಣಕ್ಕೆ ಸಿದ್ಧರಾಗಿ.
ನೀವು ಉತ್ಸುಕರಾಗಿದ್ದೀರಾ? ಹಾಗಿದ್ದಲ್ಲಿ ಪಕ್ಷಿಗಳ ವಿಸ್ಮಯ ಜಗತ್ತಿಗೆ ಹಾರೋಣ ಬನ್ನಿ!